ಹರ್ಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬೆಂ.ಕೋ.ಶ್ರೀ ಅವರು ನಿರ್ಮಿಸಿರುವ ‘ಭಾಗೀರಥಿ ಚಿತ್ರ ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಬಹಳ ಅದ್ದೂರಿಯಾಗಿ ನಿರ್ಮಾಪಕ ಶ್ರೀನಿವಾಸ್ ‘ಭಾಗೀರಥಿಯನ್ನು ಬಿಡುಗಡೆ ಮಾಡಿದರು. ಕಾಲಾತ್ಮಕ ಚಿತ್ರಗಳ ಬಿಡುಗಡೆ ಸರಳವಾಗಾಗುತ್ತದೆ ಎಂಬ ಮಾತು ಈ ಚಿತ್ರದಿಂದ ದೂರವಾಗಿದೆ. ಚಿತ್ರ ಬಿಡುಗಡೆಯ ಮಧ್ಯಾಹ್ನದ ಪ್ರದರ್ಶನಕ್ಕೆ ಬಂದ ಮಹಿಳೆಯರಿಗೆ ಬಾಗಿನ ನೀಡಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ‘ಭಾಗೀರಥಿ ಪಾತ್ರಧಾರಿ ಭಾವನಾ, ವತ್ಸಲಾಮೋಹನ್, ನಿರ್ದೇಶಕ ಬರಗೂರು ರಾಮಚಂದ್ರಪ್ಪನವರ ಶ್ರೀಮತಿಯವರು ಮಹಿಳೆಯರಿಗೆ ಬಾಗಿನ ನೀಡಿದರು.
ಬರಗೂರು ರಾಮಚಂದ್ರಪ್ಪ ಅವರು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳನ್ನು ನಿರ್ದೇಶಕರೇ ಬರೆದಿದ್ದಾರೆ.
ಹರೀಶ್ ಎನ್ ಸೊಂಡೇಕೊಪ್ಪರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಶ್ಅರಸ್ ಸಂಕಲನಕಾರರಾಗಿದ್ದಾರೆ. ಕಿಶೋರ್, ಭಾವನಾ, ಶ್ರೀನಾಥ್, ಹೇಮಚೌಧರಿ, ತಾರಾ, ಶಿವಧ್ವಜ್, ರವಿಶಂಕರ್, ಪದ್ಮಾವಾಸಂತಿ, ವತ್ಸಲಾಮೋಹನ್, ರಾಧಾರಾಮಚಂದ್ರ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.